ವೋಹ್ಲರ್, ಫ್ರೀಡ್ರಿಕ್
	1800-82. ಜರ್ಮನಿಯ ರಸಾಯನವಿe್ಞÁನಿ. 19ನೆಯ ಶತಮಾನದ ತನಕ ರಸಾಯನವಿe್ಞÁನಿಗಳು ವಸ್ತುಪ್ರಪಂಚದಲ್ಲಿ ಕಂಡುಬರುವ ಪದಾರ್ಥಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಿದ್ದರು: ಸಸ್ಯ ಮತ್ತು ಪ್ರಾಣಿ ಮೂಲದವು. ಮೊದಲನೆಯ ಗುಂಪಿಗೆ ಸಾವಯವ ಪದಾರ್ಥಗಳೆಂದೂ ಎರಡನೆಯ ಗುಂಪಿಗೆ ನಿರವಯವ ಪದಾರ್ಥಗಳೆಂದೂ ಹೆಸರು. ಸಾವಯವ ವಸ್ತುಗಳ ಜಟಿಲ ರಚನೆ ಅಂದಿನ ರಸಾಯನ ವಿe್ಞÁನಿಗಳಿಗೆ ಒಂದು ಒಗಟಾಗಿತ್ತು. ಪ್ರಯೋಗಶಾಲೆ ಯಲ್ಲಿ ಅವುಗಳ ಸಂಶ್ಲೇಷಣೆ ಮಾಡಲಾಗಲಿಲ್ಲ. ಜೀವಿಗಳಲ್ಲಿ ಮಾತ್ರ ಇರುವ ಯಾವುದೋ ಒಂದು ಜೈವಿಕ ಬಲವೇ ಸಾವಯವ  ಪದಾರ್ಥಗಳು ಮೈದಳೆಯಲು  ಕಾರಣ  ಎಂದು  ಅವರು ತರ್ಕಿಸಿದರು. 

	ಈತ ಶುದ್ಧ ನಿರವಯವ  ಪದಾರ್ಥವಾದ ಅಮೋನಿಯಮ್ ಸಯನೇಟನ್ನು (ಓಊ4ಅಓಔ) ಕಾಸಿ ಯೂರಿಯವನ್ನು {ಅಔ(ಓಊ2)2} ತಯಾರಿಸಿದ (1828). ಅಲ್ಲಿಯತನಕ ಈ ಸಂಯುಕ್ತವನ್ನು ಸಾವಯವ ವಸ್ತುವೆಂದು ಪರಿಗಣಿಸಲಾಗಿತ್ತು. ಅದನ್ನು ಪ್ರಾಣಿಗಳ ಮೂತ್ರಪಿಂಡಗಳು ಮಾತ್ರ ಉತ್ಪಾದಿಸಬಲ್ಲವು. ಅವು ಮೂತ್ರದಲ್ಲಿ ವಿಸರ್ಜಿಸಲ್ಪಡುವ ಯೂರಿಯವನ್ನು ಆ ಆಕರದಿಂದ ಮಾತ್ರ ಪಡೆಯಲು ಸಾಧ್ಯ ಎಂದು ಭಾವಿಸಲಾಗಿತ್ತು. ವೋಹ್ಲರನ ಆವಿಷ್ಕಾರದಿಂದ ಜೈವಿಕ ಬಲವಾದಕ್ಕೆ ಪೆಟ್ಟು ಬಿತ್ತು. 1884ರಲ್ಲಿ ಕೋಲ್ಬೆ (1818-84) ಕಾರ್ಬನ್, ಹೈಡ್ರೊಜನ್ ಮತ್ತು ಆಕ್ಸಿಜನ್‍ಗಳಿಂದ ಅಸಿಟಿಕ್ ಆಮ್ಲವನ್ನು  (ಅಊ3ಅಔಔಊ) ಸಂಶ್ಲೇಷಿಸಿದುದು ಮತ್ತು 1856ರಲ್ಲಿ ಬರ್ತೆಲೊ (1827-1907) ಎಂಬಾತ ಅಂಗಧಾತುಗಳಿಂದ ಈಥೇನನ್ನು (ಅ2ಊ6) ಸಂಶ್ಲೇಷಿಸಿದುದು ಜೈವಿಕಬಲವಾದದ ಅವಸಾನಕ್ಕೆ ಕಾರಣವಾದುವು. ಫಲವಾಗಿ ಸಾವಯವ ಮತ್ತು ನಿರವಯವ ವಸ್ತು ಪ್ರಪಂಚಗಳನ್ನು ನಿರ್ಮಿಸುವ ಶಕ್ತಿಗಳು ಏಕ ರೀತಿಯವು. ರಸಾಯನವಿe್ಞÁನದ ಇವೆರಡು ಮುಖ್ಯ ಶಾಖೆಗಳನ್ನು ಬೇರ್ಪಡಿಸುವ ಯಾವ ನಿಚ್ಚಳವಾದ ಗೆರೆಯೂ ಇಲ್ಲ ಎಂದು ಸಾರ್ವತ್ರಿಕವಾಗಿ ಒಪ್ಪಲಾಯಿತು. ಸಾವಯವ ರಸಾಯನವಿe್ಞÁನ ವಾಸ್ತವವಾಗಿ ಕಾರ್ಬನ್ ಸಂಯುಕ್ತಗಳಿಗೆ ಸೀಮಿತವಾದ್ದರಿಂದ ಈಗ ಈ ಶಾಖೆಯನ್ನು ಕಾರ್ಬನಿಕ ರಸಾಯನವಿe್ಞÁನವೆಂದೂ ಆದ್ದರಿಂದ ಇನ್ನೊಂದನ್ನು ಅಕಾರ್ಬನಿಕ ರಸಾಯನವಿe್ಞÁನವೆಂದೂ ಕರೆಯಲಾಗುತ್ತಿದೆ. ಲಂಡನ್ ರಾಯಲ್ ಸೊಸೈಟಿ ಈತನಿಗೆ ತನ್ನ ಅತಿ ಶ್ರೇಷ್ಠ ಪಾರಿತೋಷಿಕ ವಾದ “ಕಾಪ್ಲಿ” ಪದಕವನ್ನಿತ್ತು ಗೌರವಿಸಿತು. ಇದಕ್ಕೆ ಮುಂಚೆ ನೀಡಲಾಗಿದ್ದ ಅಲ್ಯೂಮಿನಿಯಮ್ ಪದಕದ ಬಗ್ಗೆ ಇವನಿಗೆ ಸಕಾರಣವಾಗಿ ಅಪಾರ ಅಭಿಮಾನವಿತ್ತು. ಅಲ್ಯೂಮಿನಿಯಮಿನ ಮೂಲ ಶೋಧಕನೇ ಈತ. ಕುಲುಮೆಯಿಂದ ಹೊರಬಿದ್ದ ಮೊದಲ ಅಲ್ಯೂಮಿನಿಯಮ್ ತುಂಡಿನಿಂದ ಒಂದು ಪದಕವನ್ನು ತಯಾರಿಸಿ ಇವನ ಗೌರವಾರ್ಥ ಅದರ ಒಂದು ಪಾಶ್ರ್ವದಲ್ಲಿ ಮೂರನೆಯ ನೆಪೋಲಿಯನ್ ಚಕ್ರವರ್ತಿಯ ಮುಖ ಮತ್ತೊಂದು ಪಾಶ್ರ್ವದಲ್ಲಿ “ವೋಹ್ಲರ್-1827” ಎಂದು ಕೆತ್ತಲಾಗಿತ್ತು.		
(ಎಚ್.ಜಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ